Skip to main content

Posts

Showing posts from September, 2024

ಮೂಗ್ಬೊಟ್ಟ್ ಮುಂಡೆಯರು ಬೇಕಾಗಿದ್ದಾರೆ

          ಒಂದೆರಡು ವರ್ಷದ ಹಿಂದೆ ನನ್ನ ಫೇವರಿಟ್ ಸಾಂಗ್ ಲಿರಿಕ್ ಯಾವುದು ಅಂತ ಕೇಳಿದರೆ ನಾನು ಪ್ರಾಬಬ್ಲಿ ಯೋಗರಾಜ್ ಭಟ್ ಅವರು  ಬರೆದಿರುವ "ಮೂಗುಬೊಟ್ಟಾಗಿ ಹುಟ್ಟಿದ್ರೆ ನಾನು ಇವಳ ಮೂತಿಲೇ ಇರಬಹುದಿತು" ಅಂತ ಹೇಳ್ತಿದ್ನೇನೋ. ಅದ್ಯಾಕೆ ನಾವು ಗಂಡು ಮಕ್ಕಳು ಮೂಗ್ಬೊಟ್ಟು ಹಾಕೊಳೋ ಹುಡುಗೀರನ್ನ ಇಷ್ಟ ಪಡ್ತಿವಿ ಅಂತ ಪದಗಳಲ್ಲಿ ಹೇಳೋಕ್ ಆಗಲ್ಲ. ಅದನ್ನ ಒಂದು ಅಕ್ಸಿಯೋಮ್ ಅಂತ ತಿಳ್ಕೊಳಿ. ನಾನು ಮದ್ವೆ ಆದರೆ ಒಬ್ಬಳು nose ring baddie ಎಂದರೆ ಮೂಗ್ಬೊಟ್ಟ್ ಮುಂಡೆಯನ್ನೇ ಆಗಬೇಕು ಅಂತ ಫಿಕ್ಸ್ ಆಗ್ಬಿಟ್ಟಿದ್ದೆ. ಹೋದ ವರ್ಷ ನಂಗೆ ಒಬ್ಬಳು ನೋಸ್ ರಿಂಗ್ ಬ್ಯಾಡಿ ಸಿಕ್ಕೇಬಿಟ್ಲು. ಇದು ಅವಳ ಮೂಗ್ಬೊಟ್ಟಿನ ಕಥೆ.      ಅವಳು ನನ್ನ ಮೊದಲನೇ ಪ್ರೇಯಸಿಯಾಗಿದ್ದರಿಂದ ಅವಳ ಮೇಲೆ ನನಗೆ ಅಪಾರವಾದ ಪ್ರೀತಿ ಇತ್ತು. ಅವಳ ವಿಶಾಲವಾದ ನೋಸ್ ರಿಂಗ್ ಕಲೆಕ್ಷನ್ ಇಂದ ನಂಗೆ ಒಂದು ಕೊಡು ಎಂದು ಕೇಳಿದಾಗ ತಾನು ಹಾಕಿಕೊಂಡ್ಡಿದ್ದ ಮೂಗ್ಬೊಟ್ಟನ್ನು ಬಿಚ್ಚಿ ಕೊಟ್ಟಳು. ಹೋಪ್ಲೆಸ್ ರೋಮ್ಯಾಂಟಿಕ್ ಆಗಿದ್ದ ನಾನು ಅದನ್ನ ತುಂಬ ಕೇರ್ಫುಲ್ ಆಗಿ ನನ್ನ ಆಲ್ಮೋಸ್ಟ್ ಹರಿದುಹೋಗಿದ್ದ ಪರ್ಸ್ ಅಲ್ಲಿ ಇಟ್ಟುಕೊಂಡು ಓಡಾಡ್ತಿದ್ದೆ. ಒಮ್ಮೊಮ್ಮೆ ಅದನ್ನ ತೆಗೆದು ಪ್ರೀತಿಯಿಂದ ನೋಡುತಿದ್ದೆ. ಒಬ್ಬ ಪ್ರಾಪರ್ ರಿಟನ್ ಅಂಡ್ ಡೈರೆಕ್ಟೆಡ್ ಬೈ ಯೋಗರಾಜ್ ಭಟ್ ಕ್ಯಾರೆಕ್ಟರ್ ತರ ಜೀವನ ನೆಡೆಸುತಿದ್ದೆ. ನಿಜ ಹೇಳ್ಬೇಕಂದ...