ಒಂದೆರಡು ವರ್ಷದ ಹಿಂದೆ ನನ್ನ ಫೇವರಿಟ್ ಸಾಂಗ್ ಲಿರಿಕ್ ಯಾವುದು ಅಂತ ಕೇಳಿದರೆ ನಾನು ಪ್ರಾಬಬ್ಲಿ ಯೋಗರಾಜ್ ಭಟ್ ಅವರು ಬರೆದಿರುವ "ಮೂಗುಬೊಟ್ಟಾಗಿ ಹುಟ್ಟಿದ್ರೆ ನಾನು ಇವಳ ಮೂತಿಲೇ ಇರಬಹುದಿತು" ಅಂತ ಹೇಳ್ತಿದ್ನೇನೋ. ಅದ್ಯಾಕೆ ನಾವು ಗಂಡು ಮಕ್ಕಳು ಮೂಗ್ಬೊಟ್ಟು ಹಾಕೊಳೋ ಹುಡುಗೀರನ್ನ ಇಷ್ಟ ಪಡ್ತಿವಿ ಅಂತ ಪದಗಳಲ್ಲಿ ಹೇಳೋಕ್ ಆಗಲ್ಲ. ಅದನ್ನ ಒಂದು ಅಕ್ಸಿಯೋಮ್ ಅಂತ ತಿಳ್ಕೊಳಿ. ನಾನು ಮದ್ವೆ ಆದರೆ ಒಬ್ಬಳು nose ring baddie ಎಂದರೆ ಮೂಗ್ಬೊಟ್ಟ್ ಮುಂಡೆಯನ್ನೇ ಆಗಬೇಕು ಅಂತ ಫಿಕ್ಸ್ ಆಗ್ಬಿಟ್ಟಿದ್ದೆ. ಹೋದ ವರ್ಷ ನಂಗೆ ಒಬ್ಬಳು ನೋಸ್ ರಿಂಗ್ ಬ್ಯಾಡಿ ಸಿಕ್ಕೇಬಿಟ್ಲು. ಇದು ಅವಳ ಮೂಗ್ಬೊಟ್ಟಿನ ಕಥೆ.
ಅವಳು ನನ್ನ ಮೊದಲನೇ ಪ್ರೇಯಸಿಯಾಗಿದ್ದರಿಂದ ಅವಳ ಮೇಲೆ ನನಗೆ ಅಪಾರವಾದ ಪ್ರೀತಿ ಇತ್ತು. ಅವಳ ವಿಶಾಲವಾದ ನೋಸ್ ರಿಂಗ್ ಕಲೆಕ್ಷನ್ ಇಂದ ನಂಗೆ ಒಂದು ಕೊಡು ಎಂದು ಕೇಳಿದಾಗ ತಾನು ಹಾಕಿಕೊಂಡ್ಡಿದ್ದ ಮೂಗ್ಬೊಟ್ಟನ್ನು ಬಿಚ್ಚಿ ಕೊಟ್ಟಳು. ಹೋಪ್ಲೆಸ್ ರೋಮ್ಯಾಂಟಿಕ್ ಆಗಿದ್ದ ನಾನು ಅದನ್ನ ತುಂಬ ಕೇರ್ಫುಲ್ ಆಗಿ ನನ್ನ ಆಲ್ಮೋಸ್ಟ್ ಹರಿದುಹೋಗಿದ್ದ ಪರ್ಸ್ ಅಲ್ಲಿ ಇಟ್ಟುಕೊಂಡು ಓಡಾಡ್ತಿದ್ದೆ. ಒಮ್ಮೊಮ್ಮೆ ಅದನ್ನ ತೆಗೆದು ಪ್ರೀತಿಯಿಂದ ನೋಡುತಿದ್ದೆ. ಒಬ್ಬ ಪ್ರಾಪರ್ ರಿಟನ್ ಅಂಡ್ ಡೈರೆಕ್ಟೆಡ್ ಬೈ ಯೋಗರಾಜ್ ಭಟ್ ಕ್ಯಾರೆಕ್ಟರ್ ತರ ಜೀವನ ನೆಡೆಸುತಿದ್ದೆ. ನಿಜ ಹೇಳ್ಬೇಕಂದ್ರೆ ಅದು ನನ್ನ ಜೀವನದ ಮೋಸ್ಟ ಕೇರ್ಫ್ರೀ ಸಮಯವಾಗಿತು. ಎಲ್ಲ ಜಯಂತ್ ಕೈಕಿಣಿ ಲಿರಿಕ್ಸ್ ತುಂಬ ರಿಲೇಟಬಲ್ ಆಗಿತು.
ಕೆಲವು ತಿಂಗಳ ನಂತರ ಎಲ್ಲರ ರಿಲೇಷನ್ಶಿಪ್ ತರ ನಂದೂ ಆಲ್ಮೋಸ್ಟ್ ಹಾಳಾಗೊಗಿತು. ನನ್ನ ಹಳೆಯ ಪರ್ಸ್ ಅಲ್ಲಿ ಇದ್ದ ಸಣ್ಣ ತೂತಿನಿಂದ ಅವಳ ಮೂಗ್ಬೊಟ್ಟು ಬಿದ್ದು ಕಳೆದುಹೋಗಿತ್ತು. ಈ ನೋಸ್ ರಿಂಗ್ ಕಳೆದುಹೋದಾಗಿಂದ ನನ್ನ ರಿಲೇಷನ್ಶಿಪ್ ಡೌನ್-ಫಾಲ್ ಆಗೋಕೆ ಶುರು ಆಯಿತು ಎಂದು ಭಾವಿಸಿ, ನನ್ನ ಮನೆಯ ಕೊನೆ ಕೋಣೆಯಲ್ಲೂ ಅದನ್ನ ಹುಡುಕಲು ಪ್ರಾರಂಭಿಸಿದೆ. ಆದರೆ ಅದು ಸಿಗಲೇ ಇಲ್ಲ.
ಕೆಲವು ವಾರಗಳ ನಂತರ ನಮಮ್ಮ ಕಸ ಗುಡಿಸುತ್ತಿರುವಾಗ ಆ ನೋಸ್ ರಿಂಗ್ ನನ್ನ ರೂಮಿನಲ್ಲಿ ಸಿಕ್ಕಿತಂತೆ. ಅದನ್ನ ತಂದು ತೋರಿಸಿ "ಯಾರ್ದಿದು?" ಎಂದು ನನ್ನನ್ನು ಹಲವಾರು ರೀತಿಯಲ್ಲಿ ಕೇಳಿ ರುಬ್ಬಿ, ಕೊನೆಗೆ ನನಗೇನು ಗೊತ್ತಿಲ್ಲ ಎಂದು ನಂಬಿಸಿದೆ. ನಮಮ್ಮ ಅದನ್ನ ಅರ್ಧ ನಂಬಿ, ಆ ನೋಸ್ ರಿಂಗ್ ಅನ್ನು ನನಗೆ ಕೊಡದೆ ತೊಗೊಂಡು ಹೋದರು. ನನ್ನ ಪ್ರೇಯಸಿ ಜೊತೆಯ ಸಂಬಂಧ ಈಗ ಕೇವಲ ಒಂದು ದಾರದಿಂದ ನೇತಾಡುತಿತ್ತು. ಯಾವಾಗಾದ್ರೂ ಅದು ಕಟ್ ಆಗಿ ಕೆಳಗೆ ಬಿದ್ದು ಟಪ್ ಅಂತ ಹೊಡೆದು ಹೋಗಬಹುದಿತ್ತು. ಆ ನೋಸ್ ರಿಂಗ್ ಎಲ್ಲಿದೆ ಅಂತ ಕೆಳಕ್ಕಾಗದೆ ಬಿಡಕ್ಕಾಗದೆ ಒದ್ದಾಡ್ತಿದ್ದೆ.
ಮತ್ತೊಂದು ವಾರ ಕಳೆಯಿತು. ನಾನು ಜೋರ್ಡನ್ ಪೀಟರ್ಸನ್ ಅವರು ಬರೆದಿರುವ "೧೨ ರೂಲ್ಸ್ ಫಾರ್ ಲೈಫ್" ಪುಸ್ತಕವನ್ನು ನನ್ನ ರೂಮಿನಲ್ಲಿ ಹಾಯಾಗಿ ಓದುತಿದ್ದಾಗ ನನ್ನ ತಂದೆ ನನ್ನ ರೂಮಿಗೆ ಬಂದು ನನ್ನ raison d'etre ಆಗಿದ್ದ ಆ ನೋಸ್ ರಿಂಗ್ ಅನ್ನು ನನ್ನ ಕಣ್ಣ ಮುಂದೆ ಎತ್ತಿ ಹಿಡಿದು "ಯಾರ್ದಿದು?" ಅಂತ ಗದರಿ ಕೇಳಿದರು. ಅದಕ್ಕೆ ನಾನು ಏನೇನೋ ಎಸ್ಕ್ಯೂಸೆಸ್ ಹೇಳಿ ಮತ್ತೆ ಬಚಾವಾದೆ. ನಮ್ಮಪ್ಪ "ಇದು ನಿಂದಲ್ಲ ಅಂದ್ರೆ ಕಸದ ಬುಟ್ಟಿಗೆ ಹಾಕ್ತಿನಿ" ಅಂತ ಹೇಳಿ ಹೋದರು. ಈ ವಿಷಯವನ್ನು ನನ್ನ ಪ್ರೇಯಸಿಗೆ ಹೇಳಿದಾಗ ಅವಳು ಅದೇನೇ ಆದ್ರೂ ನೀನು ಆ ನೋಸ್ ರಿಂಗ್ ಅನ್ನು ಹುಡುಕಲೇ ಬೇಕು ಎಂದು ಫೋರ್ಸ್ ಮಾಡಿದಳು. ಸರಿ ಎಂದು ನಾನು ಪುನಃ ಇಡೀ ಮನೆಯನ್ನೇ ತಲೆ ಕೆಳಗೆ ಮಾಡಿದೆ. ನನ್ನ ಡೆಸ್ಪರೇಷನ್ ಎಷ್ಟು ಇತ್ತು ಎಂದರೆ ನಮ್ಮ ಮನೆಯ ಕಸದ ಬುಟ್ಟಿಯಲ್ಲೂ ಸಹ ಹುಡುಕಿದೆ. ಕೊನೆಗೆ ನಮ್ಮ ಮನೆಯ ಡೈನಿಂಗ್ ಟೇಬಲ್ ಮೇಲೆ ಇದ್ದ ಫ್ರೂಟ್ ಬಾಸ್ಕೆಟ್ ಅಲ್ಲಿ ಅದು ಸಿಕ್ತು. ಮರುಭೂಮಿಯಲ್ಲಿ ಲೈಮ್ ಸೋಡಾ ಕುಡಿದಂಗೆ ಆಯಿತು.
ಈ ಸಂತಸದ ಸುದ್ದಿಯನ್ನು ನನ್ನ ಡವ್ ಗೆ ತಿಳಿಸಿದಾಗ ಅವಳು ಹೆಚ್ಚೇನೂ ಹೇಳಲಿಲ್ಲ. ಆದರೆ ದಿಢೀರ್ ಅಂತ ಅದೇ ರಾತ್ರಿ ಕಾರಣವಿಲ್ಲದೆ ಬ್ರೇಕ್ ಅಪ್ ಎಂದಳು. ಆ ನೋಸ್ ರಿಂಗ್ ಅನ್ನು ನನ್ನ ಮನೆಯೆಲ್ಲಾ ಹುಡುಕಿಸಿ ಆಟಾಡಿಸಿ ಇವಾಗ ಯಾಕೆ ಬ್ರೇಕ್ ಅಪ್ ಅಂತಿದಾಳೆ ಗೊತಾಗ್ಲಿಲ್ಲ. ಎಂದಿನಂತೆ ಒಂದೆರಡು ದಿನಗಳ ನಂತರ ಮತ್ತೆ ಪ್ಯಾಚ್ ಅಪ್ ಆದ್ವಿ. ಆದರೆ ಒಂದೆರಡು ವಾರಗಳ ನಂತರ ಅವಳಿಗೆ ಇನ್ನೊಬ್ಬ ಗೆಳೆಯ ಇದಾನೆ ಅನ್ನೋ ಸುದ್ದಿ ನನಗೆ ತಲುಪಿತು. ಈ ವಿಷಯವನ್ನು ಕೇಳಿ ನನ್ನ ಹೃದಯ ಜಾರಿಬಿದ್ದ ಗಾಜಿನಂತೆ ನೂರು ಚೂರಾಯಿತು. ಇಷ್ಟವಿಲ್ಲದಿದ್ದರು ಅವಳೊಂದಿಗೆ ಸಂಬಂಧ ಮುರಿಯಬೇಕಾಯಿತು.
ಅದರ ನಂತರ ಜಯಂತ್ ಕೈಕಿಣಿ ಅವರ ಲಿರಿಕ್ಸ್ ಇನ್ನು ಡೀಪ್ ಆಗಿ ಫೀಲ್ ಆಗೋಕೆ ಶುರುವಾಯಿತು. ಇದರಿಂದಾಗಿ ನನ್ನ spotify app ಅನ್ನು ಒಂದೆರಡು ತಿಂಗಳು ತೆರೆಯಲೇಯಿಲ್ಲ. ಈ ಹಂತದಲ್ಲಿ ನನಗೆ ಎಷ್ಟು ಸಿಟ್ಟಿತ್ತು ಎಂದರೆ ಕೈಕಿಣಿ ಅವರ ಮನೆ ಹುಡುಕೊಂಡು ಹೋಗಿ ಕಲ್ಲು ಎಸೆಯೋಣ ಎನ್ನಿಸಿತು. ಕೈಕಿಣಿ ಹಾಗು ಯೋಗರಾಜ್ ಭಟ್ ಅವರಿಬ್ಬರೂ ಸೇರಿ ಪ್ರೀತಿಯ ಬಗ್ಗೆ ನಮಗೆ unrealistic expectations ಕೊಡ್ತಿದ್ದಾರೆ ಅಂತ ರೇಗಿಹೋಗಿತ್ತು. ಇವರಿಬ್ಬರನ್ನು ಸುಮ್ಮನೆ ಬಿಡಬಾರದೆನಿಸಿತು.
ನನ್ನ ಇನ್ಸ್ಟಾಗ್ರಾಮ್ ಹಾಗು ಯೌಟ್ಯೂಬ್ ಅಲ್ಗಾರಿತಮ್ ಅಲ್ಲಿ ಬರಿ ಆಂಡ್ರೂ ಟೆಟ್, ಡೇವಿಡ್ ಗಾಗಿನ್ಸ್, ಹಾಗು ಜಾಕೋ ವಿಲ್ಲಿನ್ಕ್ಸ್ ರವರ ಕಂಟೆಂಟ್ ಮಾತ್ರ ಬರ್ತಿತು. ಈ ತ್ರಿಮೂರ್ತಿಯರಿಂದ ನನ್ನ ಹಳೆ ಡವ್ ಮರೆತೆ. ಆದರೆ ಇದರಿಂದಾಗಿ ನನಗೆ ಹೆಣ್ಣು ಮಕ್ಕಳ ಮೇಲೆ ತುಂಬ ಕೆಟ್ಟ ಅಭಿಪ್ರಾಯಗಳನ್ನ ಅಳವಡಿಸಿಕೊಂಡೆ. ಹೆಣ್ಣು ಎಂಬುದು ಬರೀ ವಂಚನೆ ಎಂದು ಭಾವಿಸಿದೆ. ಈ ಜ್ವಾಲಾಮುಖಿಯನ್ನು ನಾನು ಹಲವಾರು ತಿಂಗಳು ಎದೆಯಲ್ಲಿ ಇಟ್ಟುಕೊಂಡು ತಿರುಗಾಡುತಿದ್ದೆ. Spotify ಅಲ್ಲಿ Dboss ಆಡಿಯೋ ಇಲ್ಲವಾದುದರಿಂದ ಅದು ನನ್ನ spotify wrapped ಅಲ್ಲಿ ಫೀಚರ್ ಆಗಲಿಲ್ಲ. ನನ್ನ ಮಿಸೋಜಿನಿ ಲೆವೆಲ್ಸ್ ಗಗನಕ್ಕೇರಿತು.
ಮತ್ತೊಂದಷ್ಟು ತಿಂಗಳ ನಂತರ ಕೆಲವು ಸ್ನೇಹಿತೆಯರೊಂದಿಗೆ ಮಾತಾಡಿದಾಗ ಅವರು ಪ್ರೀತಿಯಲ್ಲಿ ತಮಗಾದ ಮೋಸಗಳನ್ನು ಹಂಚಿಕೊಂಡರು. ಅವಾಗ ನನಗನಿಸಿದ್ದು ಏನೆಂದರೆ ಮೋಸಮಾಡುವುದು ಯಾವುದೇ ಜೆಂಡರ್ ಗೆ ಸೀಮಿತ ಅಲ್ಲ. ಮನುಷ್ಯರೇ ಸರಿ ಇಲ್ಲ. ಅವಾಗ ಜಯಂತ್ ಕೈಕಿಣಿ ಅವರನ್ನು ಸರಿಯಾಗಿ ಅರ್ಥ ಮಾಡ್ಕೊಂಡೆ. ಅವರು ಬರೆದಿದ್ದು ಟ್ರೂ ಲವ್ ಬಗ್ಗೆ, ನಮಗೆ ಸಿಕ್ಕ ಪುಟಗೋಸಿ ಲವ್ ಬಗ್ಗೆ ಅಲ್ಲ.
ಸರ್ವರೋಗಕ್ಕೂ ಸಾರಾಯಿಯೇ ಮದ್ಧು ಎನ್ನುತ್ತಾರೆ. ಆದರೆ ನಾನಂತಿನಿ ಕೆಲವು ರೋಗಕ್ಕೆ ಸಮಯವೇ ಮದ್ಧು ಅಂತ. ನನ್ನ ಹೃದಯಕ್ಕೆ ಗ್ಯಾಪ್ ಕೊಟ್ಟು ನಾನು ಒಳ್ಳೆ ಕೆಲಸ ಮಾಡಿದೆ. ನನ್ನ ಮಿಸೋಜಿನಿಯ ಜ್ವಾಲಾಮುಖಿಯನ್ನು ಸಮಯದ ಮಂಜುಗಡ್ಡೆಯಿಂದ ಕರಗಿಸಿ ಮತ್ತೆ ರಿಟನ್ ಅಂಡ್ ಡೈರೆಕ್ಟೆಡ್ ಬೈ ಯೋಗರಾಜ್ ಭಟ್ ಅದೇ.
ನನ್ನ ಹಳೆಯ ತೂತಾಗಿರೋ ಪರ್ಸ್ ಅನ್ನು ಬಿಸಾಕಿ ಒಂದು ಹೊಸ ವುಡ್ಲ್ಯಾಂಡ್ ಪರ್ಸ್ ಅನ್ನು ಖರೀದಿಸಿದ್ದೇನೆ. ಮತೊಬ್ಬಳು ಯಾರಾದ್ರೂ nose ring baddie, ಎಂದರೆ ಮೂಗ್ಬೊಟ್ಟ್ ಮುಂಡೆಯಿಂದ ನನ್ನ ಜೀವನ ಮತ್ತೆ ಹಾಳುಮಾಡ್ಕೊಳೋಣ ಎಂದು ಸಿದ್ಧನಾಗಿದ್ದೇನೆ. ಇದಕ್ಕೆ ಯಾರಾದರು ತಮ್ಮ ಮೂಗ್ಬೊಟ್ಟನ್ನು ಡೊನೇಟ್ ಮಾಡತೀರಾ ಎಂದರೆ ದಯವಿಟ್ಟು ನನ್ನ ಡಿ.ಎಂ. ಒಳಗೆ ಜಾರಿ ಬರಲು ಸಂಕೋಚ ಪಡಬೇಡಿ.
ಇಂತಿ ನಿಮ್ಮ ಪ್ರೀತಿಯ
ಲಿಖಿತ್
This Document Typed Online Using -
https://kannada.indiatyping.com

Comments
Post a Comment